ಆತ್ಮೀಯ ಮಿತ್ರರೇ,
ಕನ್ನಡCircle ತಂಡದ ಸದಸ್ಯರು ಮತ್ತು ಕಾರ್ಟೂನ್ ಪ್ರಿಯರ ಬಹಳ ದಿನಗಳ ಕಾಯುವಿಕೆಗೆ ಅಂತೂ ಮುಕ್ತಿ ಸಿಗುವ ಕಾಲ ಕೂಡಿ ಸಿಕ್ಕಿದೆ. ಹರಿತ ಅಭಿವ್ಯಕ್ತಿಗೆ ಹೆಸರಾಗಿರುವ ಖ್ಯಾತ ಕಾರ್ಟೂನಿಸ್ಟ್ ಕಾಂತೇಶ ಬಡಿಗೇರ್ ಅವರ ಸಮಗ್ರ ವ್ಯಂಗ್ಯಚಿತ್ರಗಳ ಪ್ರದರ್ಶನ ಬರುವ ಜನವರಿ 2ನೇ ತಾರೀಕಿನಿಂದ 2 ವಾರಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇದನ್ನೇ ಆಮಂತ್ರಣ ಪತ್ರಿಕೆ ಎಂದುಕೊಂಡು, ಮರೆಯದೆ ತಾವೆಲ್ಲರೂ ಬರಬೇಕು. ಜೊತೆಗೆ ನಿಮ್ಮ ಸ್ನೇಹಿತರು, ಮಕ್ಕಳು ಹಾಗು ಕುಟುಂಬ ಸಮೇತ ಬನ್ನಿ. ಪ್ರವೇಶ ಸಂಪೂರ್ಣ ಉಚಿತ ಈ ವಿಷಯದ ಚರ್ಚೆ ಈಗ ಅಗತ್ಯವಿತ್ತೋ ಇಲ್ಲವೋ ಎನ್ನುವುದು ಬೇರೆಯ ವಿಷಯ. `ರಾಜ್ಯ ವಿಭಜನೆ’ ಎಂಬುದು ಚರ್ಚೆಗೆ ಬರಲು ಕಾರಣವಾದರೂ ಏನು..? ಬರೀ ಉಮೇಶ ಕತ್ತಿ ಎಂಬ ಮಾಜಿ ಸಚಿವರ ರಾಜಕೀಯ ಲಾಭದ ಹೇಳಿಕೆ ಅಷ್ಟೇನಾ..? ವಾಸ್ತವಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧವೇ ಇಲ್ವಾ..? ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳಾದರೂ ಹಳೇ ಮೈಸೂರು ಪ್ರಾಂತ್ಯದಲ್ಲೇ ಕೋಲಾರ, ಚಾಮರಾಜನಗರ ಜಿಲ್ಲೆಗಳ ಸ್ಥಿತಿ ಹೇಗಿದೆ..? ಇಂತಹ ಹಲವು ವಿಷಯಗಳ ಬಗ್ಗೆ ಕನ್ನಡ Circleನಲ್ಲಿ ಮಾಂಡವ್ಯಪುತ್ರ ನಿಮ್ಮ ಮುಂದಿಟ್ಟಿದ್ದಾರೆ. ಅಖಂಡ ಕರ್ನಾಟಕದಲ್ಲಿ ಮತ್ತೆ ಪ್ರತ್ಯೇಕತೆಯ ಕೂಗು ಕೇಳಿಸಿದೆ. ಮಾಜಿ ಸಚಿವ ಹಾಗೂ ಶಾಸಕ ಉಮೇಶ ಕತ್ತಿ ಅವರ ಮನದಾಳ ಹಾಗೂ ಉಮೇದು ಏನಿದೆಯೋ ತಿಳಿದಿಲ್ಲ. ಆದರೆ ಅವರು ಪದೇ ಪದೇ ಈ ಸ್ವರಹೊರಡಿಸುತ್ತಿದ್ದಾರೆ.
ಆದರೆ ಅವರು ಎಲ್ಲೋ ಕುಳಿತು ಕೇಳಿದ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಕೊಡುವುದಕ್ಕೂ, ಅದನ್ನು ಉಮೇಶ ಕತ್ತಿ ತೆಗೆದುಕೊಳ್ಳುವುದಕ್ಕೂ ಅಪ್ಪನ ಆಸ್ತಿಯನ್ನು ಮಕ್ಕಳು ಹಂಚಿಕೊಂಡಷ್ಟು ಸುಲಭವಲ್ಲ. ಜತೆಗೆ ಈ ಪ್ರತ್ಯೇಕ ರಾಜ್ಯ ರಚನೆಯ ಕಾನೂನು ಪ್ರಕ್ರಿಯೆಯ ಆಳ-ಸಮಯದ ಅರಿವಿಲ್ಲದೆ ತಥಾಕಥಿತ ಕನ್ನಡ ಹೋರಾಟಗಾರರು ಮಾಧ್ಯಮಗಳ ಮುಂದೆ ಭಾವನಾತ್ಮಕಾವಾಗಿ ಕಿರುಚಾಡಿದ್ದಾರೆ. ಮಾಧ್ಯಮಗಳು ಸಹ ಉಮ್ಮೇಶ ಕತ್ತಿ ಹೀಗೆ ಹೇಳಿದ್ದಾರೆ..? ನೀವೇನೂ ಹೇಳುತ್ತೀರಿ ಎಂದು ಪ್ರತ್ಯೇಕ ರಾಜ್ಯ ಬೇಡಿಕೆಯ ಪರ- ವಿರೋಧಿಗಳನ್ನು ಸ್ಪಷ್ಟವಾಗಿ ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಗಿದಿದೆ. |
Cartoon Cornerಖ್ಯಾತ ವ್ಯಂಗ್ಯ ಚಿತ್ರಕಾರ ಪ್ರೀತಿಯಿಂದ
ರಮಾಕಾಂತ ಗುಗ್ರಿ ಸಂಸ್ಥಾಪಕ ಸಂಪಾದಕ, ಕನ್ನಡCircle
Archives
August 2016
Categories |