Kannada Circle
  • Home
  • Latest
    • Cartoon
  • Breaking News
  • About Us
ನಮ್ಮನ್ನು ಹೀಗೂ ತಲುಪಬಹುದು



ನೀರಿನ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು...

ಆತ್ಮೀಯ ಮಿತ್ರರೇ,
ನೀರಿನ ವಿಚಾರ ಬಂದಾಗಲೆಲ್ಲಾ ನಮ್ಮ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಕಾವೇರಿಯ ವಿಚಾರವೇ ಇರಲಿ ಇಲ್ಲ, ಕೃಷ್ಣೆಯ ವಿಚಾರವೇ ಇರಲಿ ಆಶಾದಾಯಕ ಬೆಳವಣಿಗೆ ಕಾಣಲೇ ಇಲ್ಲ. ಈಗ ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲೂ ಅದು ಮರುಕಳಿಸಿದೆ. ಕುಡಿಯುವ ನೀರಿಗೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ನರಗುಂದದಲ್ಲಿ ರೈತರ ಹೋರಾಟ ಶುರುವಾಗಿ ವರ್ಷ ಕಳೆದಿದೆ. ಅದಕ್ಕೆ ಪ್ರತಿಫಲ ಏನೋ ಅನ್ನುವಂತೆ ಮಹಾದಾಯಿ ನ್ಯಾಯಾಧಿಕರಣದ ಈ ಮಧ್ಯಂತರ ತೀರ್ಪು ಬಂದಿದೆ. ಇದನ್ನು ಕನ್ನಡಿಗರಾದ ನಾವ್ಯಾರೂ ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.
ಹೀಗಿರುವಾಗ, ರಾಜ್ಯಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ಕಾಪು ಪಡೆದುಕೊಂಡಿದೆ. ಎಲ್ಲರೂ ಜಾತಿ, ಮತ, ಪ್ರಾದೇಶಿಕ ಬೇಧ ಭಾವಗಳನ್ನು ಮರೆತು ಈ ಹೋರಾಟಕ್ಕೆ ಬೆಂಬಲಿಸುತ್ತಿರುವುದು ರೈತರಿಗೆ ನಿಜಕ್ಕೂ ಆನೆ ಬಲ ಬಂದಂತಾಗಿದೆ.
ಇದೇ ವೇಳೆ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ತರುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇರುವ ಸಮಾನ ಮನಸ್ಕ ಮಿತ್ರರೆಲ್ಲರೂ ಕೂಡಿ ಹೋರಾಟಕ್ಕೆ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ನಮಗೆ ನಿಮ್ಮೆಲ್ಲರ ಬೆಂಬಲ ಬೇಕು...
ಕನ್ನಡ ಸೇವೆಯ Circleನಲ್ಲಿ...

ರಮಾಕಾಂತ ಗುಗ್ರಿ
ಸಂಸ್ಥಾಪಕ ಸಂಪಾದಕ, ಕನ್ನಡCircle
[email protected]

ಓದುಗರಲ್ಲಿ ಮನವಿ:
ಈ ಪುಟವನ್ನು ನಿಮ್ಮ ಫೆಸ್ ಬುಕ್ ಹಾಗು ಟ್ವಿಟ್ಟರ್ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮುಂದಿರುವ ಬಟನ್ ಒತ್ತಿ.
Tweet

Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign