Kannada Circle
  • Home
  • Latest
    • Cartoon
  • Breaking News
  • About Us

‘ಕತ್ತಿ’ಯ ಹರಿತ ಅಲಕ್ಷಿಸಬೇಡಿ..!

23/9/2014

 
ಈ ವಿಷಯದ ಚರ್ಚೆ ಈಗ ಅಗತ್ಯವಿತ್ತೋ ಇಲ್ಲವೋ ಎನ್ನುವುದು ಬೇರೆಯ ವಿಷಯ. `ರಾಜ್ಯ ವಿಭಜನೆ’ ಎಂಬುದು  ಚರ್ಚೆಗೆ ಬರಲು ಕಾರಣವಾದರೂ ಏನು..? ಬರೀ ಉಮೇಶ ಕತ್ತಿ ಎಂಬ ಮಾಜಿ ಸಚಿವರ ರಾಜಕೀಯ ಲಾಭದ ಹೇಳಿಕೆ ಅಷ್ಟೇನಾ..? ವಾಸ್ತವಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧವೇ ಇಲ್ವಾ..? ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕಗಳಾದರೂ ಹಳೇ ಮೈಸೂರು ಪ್ರಾಂತ್ಯದಲ್ಲೇ ಕೋಲಾರ, ಚಾಮರಾಜನಗರ ಜಿಲ್ಲೆಗಳ ಸ್ಥಿತಿ ಹೇಗಿದೆ..? ಇಂತಹ ಹಲವು ವಿಷಯಗಳ ಬಗ್ಗೆ ಕನ್ನಡ Circleನಲ್ಲಿ ಮಾಂಡವ್ಯಪುತ್ರ ನಿಮ್ಮ ಮುಂದಿಟ್ಟಿದ್ದಾರೆ.
Picture
ಅಖಂಡ ಕರ್ನಾಟಕದಲ್ಲಿ ಮತ್ತೆ ಪ್ರತ್ಯೇಕತೆಯ ಕೂಗು ಕೇಳಿಸಿದೆ. ಮಾಜಿ ಸಚಿವ ಹಾಗೂ ಶಾಸಕ ಉಮೇಶ ಕತ್ತಿ ಅವರ ಮನದಾಳ ಹಾಗೂ ಉಮೇದು ಏನಿದೆಯೋ ತಿಳಿದಿಲ್ಲ. ಆದರೆ ಅವರು ಪದೇ ಪದೇ ಈ ಸ್ವರಹೊರಡಿಸುತ್ತಿದ್ದಾರೆ.
ಆದರೆ ಅವರು ಎಲ್ಲೋ ಕುಳಿತು ಕೇಳಿದ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಕೊಡುವುದಕ್ಕೂ, ಅದನ್ನು ಉಮೇಶ ಕತ್ತಿ ತೆಗೆದುಕೊಳ್ಳುವುದಕ್ಕೂ ಅಪ್ಪನ ಆಸ್ತಿಯನ್ನು ಮಕ್ಕಳು ಹಂಚಿಕೊಂಡಷ್ಟು ಸುಲಭವಲ್ಲ. ಜತೆಗೆ ಈ ಪ್ರತ್ಯೇಕ ರಾಜ್ಯ ರಚನೆಯ ಕಾನೂನು ಪ್ರಕ್ರಿಯೆಯ ಆಳ-ಸಮಯದ ಅರಿವಿಲ್ಲದೆ ತಥಾಕಥಿತ ಕನ್ನಡ ಹೋರಾಟಗಾರರು ಮಾಧ್ಯಮಗಳ ಮುಂದೆ ಭಾವನಾತ್ಮಕಾವಾಗಿ ಕಿರುಚಾಡಿದ್ದಾರೆ. ಮಾಧ್ಯಮಗಳು ಸಹ ಉಮ್ಮೇಶ ಕತ್ತಿ ಹೀಗೆ ಹೇಳಿದ್ದಾರೆ..? ನೀವೇನೂ ಹೇಳುತ್ತೀರಿ ಎಂದು ಪ್ರತ್ಯೇಕ ರಾಜ್ಯ ಬೇಡಿಕೆಯ ಪರ- ವಿರೋಧಿಗಳನ್ನು ಸ್ಪಷ್ಟವಾಗಿ ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಗಿದಿದೆ.
Picture
ಆದರೆ ಇಲ್ಲಿರುವುದು ಪ್ರತ್ಯೇಕತೆಯ ಬೇಡಿಕೆಯ ಧ್ವನಿಯ ಮೂಲದ ಪ್ರಶ್ನೆ. ಕರ್ನಾಟಕ ರಾಜ್ಯ ರಚನೆಯಾದ ಅಂದಿನಿಂದಲೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಸರ್ಕಾರ ಪ್ರಾಮಾಣಿಕವಾಗಿ ಕೈಗೊಂಡಿರುವ ಕೆಲಸಗಳು ಹಾಗೂ ಅದು ಅನುಷ್ಠಾನಗೊಳ್ಳಲು ಅಲ್ಲಿನ ನಾಯಕರು ವಹಿಸಿದ ಮುತುವರ್ಜಿ ಎಷ್ಟು ಎಂಬುದು ತಿಳಿಯಬೇಕಿದೆ. ಏಕೆಂದರೆ ಹಳೇ ಮೈಸೂರು ಪ್ರಾಂತ್ಯ, ಹೈದರಬಾದ್ ಕರ್ನಾಟಕ, ಮುಂಬೈಕರ್ನಾಟಕ, ಕರಾವಳಿ ಕರ್ನಾಟಕ ಭಾಗಗಳು ಎಂದೆ ಈಗಲೂ ಕರೆಯಿಸಿಕೊಳ್ಳುವ ಈ ಪ್ರದೇಶಗಳ ಅಭಿವೃದ್ಧಿಯನ್ನು ಸೂಕ್ಷ್ಮವಾಗಿ ಗಮನಿಸದರೆ ಪ್ರತ್ಯೇಕತೆಯ ಕೂಗು ಯಾಕೆ ಇನ್ನುವುದು ಸ್ಪಷ್ಟವಾಗುತ್ತದೆ. ಯಾವುದೇ ವ್ಯಕ್ತಿಗೂ ನನಗೆ ಈ ಸ್ಥಳದಲ್ಲಿದ್ದರೆ ಆಗುವ ಅನುಕೂಲಗಳು, ಅಭಿವೃದ್ಧಿ, ಸಿಗುವ ಸೌಕರ್ಯಗಳು ಬಹುಮುಖ್ಯವಾಗುತ್ತವೆ. ಅದಿಲ್ಲದ್ದಿರೇ ಎಲ್ಲಿದ್ದರೂ ಇದು ನನ್ನ ಊರು, ನನ್ನ ರಾಜ್ಯ, ನನ್ನ ದೇಶ ಎಂಬ ಅಕ್ಕರೆ ಹುಟ್ಟುವುದಿಲ್ಲ. ಏಕೆಂದರೆ ಈಗಲೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕನಿಷ್ಟ ಮೂಲಸೌಲಭ್ಯಗಳು ಇಲ್ಲದ ಗ್ರಾಮಗಳೆ ಹೆಚ್ಚು. ಇದಕ್ಕೆ ಅಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣವಾದರೂ ಕೇವಲ ಮತ ನೀಡುವ ಕ್ಷೇತ್ರದ ಅಭಿವೃದ್ಧಿ ಹಾಗೂ ಜಾತಿಯ ದೃಷ್ಟಿ ಕೋನಗಳನ್ನಿಟ್ಟುಕೊಂಡು ರಾಜ್ಯವಾಳಿದ ಹಲವು ಮುಖ್ಯಮಂತ್ರಿಗಳು ಕಾರಣವಾಗುತ್ತಾರೆ. ಯಾವುದೇ ಸರ್ಕಾರಿ ಕೆಲಸಕ್ಕೂ ಬೀದರದಿಂದ ಬೆಂಗಳೂರಿಗೆ ಬರುವ ನಾಗರಿಕನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವಲೋಕಿಸಬೇಕಿದೆ.
ಜತೆಗೆ ಸಂಪತ್ಭರಿತ ಎಂದು ಕಾಣುವ ಪ್ರದೇಶಗಳಲ್ಲೂ ತೀರಾ ಹಿಂದುಳಿದ ತಾಲೂಕು ಜಿಲ್ಲೆಗಳಿವೆ. ಇದಕ್ಕೆ ಹಳೇ ಮೈಸೂರು ಭಾಗದ ಗಡಿ ಜಿಲ್ಲೆ ಚಾಮರಾಜನಗರವೇ ಸಾಕ್ಷಿ. ಇನ್ನೂ ಇತ್ತ ಕೋಲಾರ ಜಿಲ್ಲೆಯದ್ದೂ ಅದೇ ಪರಿಸ್ಥಿತಿ. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. (ಕೋಲಾರ ಭಾಗಕ್ಕೆ ಎತ್ತಿನ ಹೊಳೆ ಯೋಜನೆ ಮಂಜೂರಾಗಿದೆ ಅಷ್ಟೇ.) ಇನ್ನು ಕಾವೇರಿ ಹರಿದಾಡುವ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್. ಪೇಟೆ ತಾಲೂಕುಗಳದ್ದೂ ಇದೇ ಪರಿಸ್ಥಿತಿ. ಅತ್ತ ಕೊಡಗು ಜಿಲ್ಲೆಯಂತೂ ಆಡಳಿತಾತ್ಮಕವಾಗಿ ಕರ್ನಾಟಕದಲ್ಲಿದೆ ಎಂದು ಕೊಳ್ಳಬಹುದು ಅಷ್ಟೇ ಆದ್ರೆ ಮಾನಸಿಕವಾಗಿ ಪ್ರತ್ಯೇಕವಾಗಿಯೇ ಇದೆ. ಉಮೇಶ ಕತ್ತಿ ಅವರಂತೆಯೇ ಈ ಭಾಗದ ನಾಯಕರೆಲ್ಲರೂ ವಿಭಜನೆಯ ಕತ್ತಿ ಹಿಡಿದು ನಿಂತರೆ ಕರ್ನಾಟಕ ಎರಡು ಭಾಗವಲ್ಲ. ತುಂಡು- ತುಂಡಾಗುತ್ತದೆ.
ಕೇವಲ ರಾಜಧಾನಿ ಬೆಂಗಳೂರು ಅಭಿವೃದ್ಧಿಯ ತಳಹದಿಯ ಮೇಲೆ ಇಡಿ ಕರ್ನಾಟಕವನ್ನೂ ಅಳೆಯಲಾಗುವುದಿಲ್ಲ. ರಾಜಧಾನಿಯಲ್ಲಿನ ಒಂದು ಬಡಾವಣೆಯ ಬೀದಿಯಲ್ಲಿನ ಚರಂಡಿ ಕಟ್ಟಿಕೊಂಡೋ, ತೆರೆದುಕೊಂಡೋ ನಿವಾಸಿಗಳು ಅನುಭವಿಸುವ ಕಷ್ಟವೂ, ನೀರು ಪೂರೈಕೆ ಮಾರ್ಗದಲ್ಲಿನ ತುರ್ತು ರಿಪೇರಿ ಕಾರ್ಯನಿಮಿತ್ತ ರಾಜಧಾನಿಯ ಕೆಲ ಬಡಾವಣೆಗಳಿಗೆ ಈ ವಾರ ನೀರು ಸರಬರಾಜು ಆಗುವುದಿಲ್ಲ ಎಂದು ವಾರದ ಮೊದಲೆ ಬೆಂಗಳೂರು ಜಲಮಂಡಳಿ ಹೊರಡಿಸುವ ಪತ್ರಿಕಾ ಪ್ರಕಟಣೆಗೆ ಸಿಕ್ಕಷ್ಟೇ ಪ್ರಾಮುಖ್ಯತೆ ಉತ್ತರ ಕರ್ನಾಟಕದಲ್ಲಿನ ಒಂದು ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ಇಲ್ಲದೆ ಅನುಭವಿಸುವ ಸಂಕಷ್ಟ ಒಂದೆ ಆಗಬೇಕಿದೆ.
Picture
ಆದರೆ ಇದು ಆಗುತ್ತಿಲ್ಲ. ಜತೆಗೆ ಮಾಧ್ಯಮಗಳಲ್ಲಿ ಪ್ರಚಾರವಾದ ವಿಷಯಗಳಿಗೆ ಮಾತ್ರ ಈ ಡ್ಯಾಶ್ ವಾಹಿನಿ ನಮ್ಮ ಕಣ್ಣು ತೆರೆಸಿದೆ, ಅದಕ್ಕೆ ಅಭಿನಂದನೆಗಳು ಎಂಬ ಸೋಗಲಾಡಿತನದ ಹೇಳಿಕೆ ನೀಡುವ ಸಚಿವರು, ನಾಯಕರು, ಅಧಿಕಾರಿಗಳು ಜಡತ್ವಬಿಡಬೇಕಿದೆ. ಕೇವಲ ಮಾಧ್ಯಮಗಳಲ್ಲಿ ಪ್ರಚಾರವಾದ ವಿಷಯಗಳನ್ನು ಮಾತ್ರ ಇವರು ಗಮನಹರಿಸುವುದಾದರೆ ಇವರು ಏಕೆಬೇಕು..? ಈ ವ್ಯವಸ್ಥೆಗಳೆಲ್ಲಾ ಏಕೆಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇದೇ ಪ್ರಶ್ನೆಯನ್ನೂ ಪ್ರತ್ಯೇಕ ರಾಜ್ಯ ಕೇಳುತ್ತಿರುವ ಉಮೇಶ ಕತ್ತಿಯವರನ್ನೂ ಕೇಳಬೇಕಾಗುತ್ತದೆ. ಏಕೆಂದರೆ ಅವರು ಸಚಿವರಾಗಿದ್ದಾಗ ಅದಕ್ಕೂ ಮೊದಲು ಜೆಡಿಎಸ್ನಲ್ಲಿದ್ದಾಗ ಆ ಭಾಗಕ್ಕೆ ಮಾಡಿರುವುದೇನು ಎಂದು. ಏಕೆಂದರೆ ಬಿಜೆಪಿ ಅಧಿಕಾರದಲ್ಲಿರುವಷ್ಟು ದಿನ ಇಬ್ಬರು ಮುಖ್ಯಮಂತ್ರಿಗಳ ಪದಚ್ಯುತಿ, ಮೂವರ ಆಯ್ಕೆ ಪ್ರಕ್ರಿಯೆಯ ಸಭೆಗಳಲ್ಲೇ ತೊಡಗಿಸಿಕೊಂಡಿದ್ದ ಅಂದಿನ ಸಚಿವ ಉಮೇಶ ಕತ್ತಿ ಆ ಭಾಗದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೆ ಸಮಯ ಇರಲಿಲ್ಲ ಎನಿಸುತ್ತದೆ. ಈಗ ಆ ತರಹದ ಯಾವುದೇ ‘ಮಹತ್ ಕಾರ್ಯ’ಗಳಿಲ್ಲದೆ ಬೇಜಾರು ಆಗಿರುವುದರಿಂದಲೋ ಏನೋ ಅಥವಾ ಆ ದಿನಗಳಲ್ಲಿ ದಿನವೂ ಏನಾದರೂ ಹೇಳಿಕೆಕೊಟ್ಟು ಮಾಧ್ಯಮಗಳಲ್ಲಿ ಮಿಂಚುತ್ತಾ ಈಗ ಏನೂ ಇಲ್ಲದೆ ಅಸ್ತಿತ್ವದ ಪ್ರಶ್ನೆ ಕಾಡಿದ್ದರಿಂದ ಈ ರೀತಿಯ ಮಾಧ್ಯಮಗಳ ಟಿಆರ್ಪಿ ಏರಿಸುವ ಸುದ್ದಿ ಹರಿಯಬಿಟ್ಟಿದ್ದಾರೆ.
ಆದರೆ ಇದೆಲ್ಲಕ್ಕೂ ಮಿಗಿಲಾಗಿ ಮಾಜಿ ಸಚಿವ ಉಮೇಶ ಕತ್ತಿ ಅವರ ಈ ಧ್ವನಿ ಇಡೀ ಉತ್ತರ ಕರ್ನಾಟಕದ ಜನತೆಯ ಬೇಡಿಕೆಯ ಘೋಷಣಾವಾಕ್ಯವಾಗಿ ಬದಲಾವಣೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ, ಕರ್ತವ್ಯ ರಾಜ್ಯ ಸರ್ಕಾರದ ಮೇಲಿದೆ. ಜತೆಗೆ ತಥಾಕಥಿತ ಕನ್ನಡ ಹೋರಾಟಗಾರರ ಮೇಲೂ ಇದೆ.
ಇಲ್ಲದಿದ್ದರೇ ಪಕ್ಕದ ಆಂಧ್ರಪ್ರದೇಶದಲ್ಲಿ ಆದ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಮರುಕಳಿಸದಿರಲಿ ಎನ್ನುವುದೇ ಪ್ರತಿಯೊಬ್ಬ ಕನ್ನಡಿಗನ ಒತ್ತಾಸೆ.

 ಎಡಿಟರ್ಸ್ ನೋಟ್...

ಭೌಗೋಳಿಕ ಅಂತರ:
ಉತ್ತರ ಕರ್ನಾಟಕದ ಜನ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿರೋದು ರಾಜಧಾನಿಗೂ ಮತ್ತು ಈ ಪ್ರದೇಶಕ್ಕೂ ಇರುವ ಭೌಗೋಳಿಕ ಅಂತರ. ಬೀದರ-646 ಕಿ.ಮೀ. ದೂರ ಇದ್ದರೇ, ವಿಜಾಪುರ-553 ಕಿ.ಮೀ ಮತ್ತು ಬೆಳಗಾವಿ-509 ಕಿ.ಮೀ ದೂರವಿದೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಸಣ್ಣ ಕೆಲಸವಿದ್ದರೂ ಅಲ್ಲಿನ ಜನ ಬೆಂಗಳೂರಿಗೆ ಬರುವುದು ಅನಿವಾರ್ಯ. ಒಮ್ಮೆ ಬಂದು ವಾಪಸಾಗಲು ಸುಮಾರು 3-4 ದಿನಗಳೇ ಬೇಕು. ಉದಾಹರಣೆಗೆ ಹೇಳಬೇಕೂಂದ್ರೆ, ಮೆಜೆಸ್ಟಿಕ್ನಿಂದ ಸೋಮವಾರ ರಾತ್ರಿ 10 ಗಂಟೆಗೆ ಹೊರಡುವ ರೈಲು ಬೀದರ ತಲುಪುವ ಹೊತ್ತಿಗೆ ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಆಗಿರುತ್ತೆ. ಅಲ್ಲಿಂದ ತಮ್ಮ ಮನೆ ಸೇರುವ ಹೊತ್ತಿಗೆ ಗಡಿಯಾರ ಎರಡು ಸುತ್ತು ಹಾಕಿಯಾಗಿರುತ್ತದೆ. ಅದರೆ, ಸುಮ್ಮನೆ ಹೀಗೆ ಬಂದು ಹಾಗೆ ಹೋಗುವುದಕ್ಕೇನೇ ಎರಡು ದಿನಗಳು ಬೇಕು ಎಂದಾಯಿತು. ಇದರ ನಡುವೆ ಇಲಾಖೆಗಳಲ್ಲಿ ಸಂಬಂಧಪಟ್ಟವರು ಸಿಗದೇ ಹೋದರೆ ಹೊಟೆಲ್ ಊಟ, ಲಾಡ್ಜ್ ವಸತಿ ಅನಿವಾರ್ಯ. ಹೀರುವಾಗ ಬಹುಪಾಲು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವ ಉತ್ತರ ಕರ್ನಾಟಕದ ಜನ ಹೋಟೆಲ್ ಊಟಕ್ಕಾಗಿ ದಿನಕ್ಕೆ ಕನಿಷ್ಠ 200ರೂ, ವಸತಿಗೆ 500-700 ಖರ್ಚು ಮಾಡಲು ಹೇಗೆ ಸಾಧ್ಯ? ಇದು ಆ ಭಾಗದ ಜನರನ್ನು ಸಾಕಷ್ಟು ಹೈರಾಣಾಗಿಸಿರುವುದು ನಾವೆಲ್ಲಾ ಕನ್ನಡದ ಮೇಲಿಟ್ಟಿರುವ ಅಭಿಮಾನದಷ್ಟೇ ಸತ್ಯ.
ಪ್ರೀತಿಯಿಂದ
ರಮಾಕಾಂತ ಗುಗ್ರಿ
ಸಂಪಾದಕ, ಕನ್ನಡCircle
b s manjunatha
23/9/2014 12:38:46 pm

very good artical, deeply and widely thoughts discussed.

ramakrishna advacate
23/9/2014 07:03:10 pm

ತುಂಬಾ ಒಳ್ಳೆಯ ಲೇಖನ. ಸರ್ಕಾರಕ್ಕೆ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಿ. ಇಷ್ಟೊಂದು ಆಳವಾಗಿ ಯಾರೂ ರಾಜ್ಯ ಇಬ್ಭಾಗದ ಬಗ್ಗೆ ಮಹಿತಿ ನೀಡಿರಲಿಲ್ಲ. ಕನ್ನಡ ಸರ್ಕಲ್‍ಗೆ ಅಭಿನಂದನೆಗಳು. ಹೀಗೆ ಮುಂದುವರೆಲಿ. ನಮ್ಮ ಪ್ರೋತ್ಸಾಹ ನಿಮಗೆ ಇದ್ದೆ ಇರುತ್ತದೆ.

Sanjeev
24/9/2014 03:11:50 am

Effective thoughts

doreswami
24/9/2014 12:45:30 pm

prateyka rajya keluudakke karanagalenu, idaralli sarkarada patra eshtu , adhikarigala koduge eshtu embuddannu chennagi nirupisideeri, vandanegelu

Mahabaleshwar Hegde
25/9/2014 04:50:07 pm

neevu heliddu correct.but uttara karnatakada jananu change agbeku. toilet kattokolro anta hana manjuru adre inneno karchu madtare. davanagere,hubli,belgaum,raichur,bellary istu develop adre saku. almost alla kade jana migrate agtare. Blr sudharisotte.

Puttaraju
13/10/2014 07:20:22 pm

Ramakanthjiiiiii super article... nice job... all the best brother


Comments are closed.

    Cartoon Corner

    ಖ್ಯಾತ ವ್ಯಂಗ್ಯ ಚಿತ್ರಕಾರ
    ಕಾಂತೇಶ ಬಡಿಗೇರ ಅವರ
    ಕೈಚಳಕದಲ್ಲಿ ಪ್ರಚಲಿತ ವಿದ್ಯಮಾನದ ಕುರಿತು ಚಿಕಿತ್ಸಕ ರೀತಿಯಲ್ಲಿ ಪ್ರತಿ ಸೋಮವಾರ ಒಂದೊಂದು ಕಾರ್ಟೂನ್ ನಿಮ್ಮ ಮುಂದಿಡುತ್ತೇವೆ. ನೀವೂ ಅದರ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಹಂಚಿಕೊಳ್ಳಿ...

    ಪ್ರೀತಿಯಿಂದ
    ರಮಾಕಾಂತ ಗುಗ್ರಿ
    ಸಂಸ್ಥಾಪಕ ಸಂಪಾದಕ, ಕನ್ನಡCircle

    Facebook Comments

    1.uttara karnataka bere agodu beda sir elloro kodi baloona matte ellora kodi beleyona so please co-operate to improve the whole karnataka we want to keep all together and move ahead with equal ideas thank you..!
    Facebook Timeline

    - Sangeev Heremath


    2.ಆಯೋಗ್ಯ ಮತ್ತು ಅಪಕ್ವ ಮನಸ್ಸುಗಳು ಮಾತ್ರವೇ ಪ್ರತ್ಯೇಕತೆ ಬಯ ಸುತ್ತವೆ.ಏಕತೆೆಗಾಗಿ ತುಡಿಯುವ ಹೃದಯವಂತಿಕೆ ಅವರಿಗೂ ಬರ ಲಿ...


    - Guru Raj

    3.We also not interested but they should give importance to North Karnataka and shud help in the growth of it otherwise Ppl will get such ideas...


    - Vinay Zalaki

    4.ಉಮೇಶ್ ಕತ್ತಿಯವರ ಹೇಳಿಕೆಯಲ್ಲಿ ಹುರುಳಿಲ್ಲ..ಅಲ್ಲಿನ ಪರಿಸ್ಥಿತಿ ಕುರಿತು ಕೋಪಗೊಂಡು ಹೇಳಿದ್ದಾರೆ ಅಷ್ಟೇ ಅಂತಾ ನನ್ನ ಅನಿಸಿಕೆ...


    - Guruprasad N J>

    5.ಬೇಡ ಅಖಂಡ ಕರ್ನಾಟಕವಾಗಿ ಸದಾ ಮೆರೆಯಲಿ. ನಲಿಯಲಿ.


    - ವಸಂತ್ ಆರ್ >

    6.ಉತ್ತರ ಕರ್ನಾಟಕಕ್ಕೂ ಪ್ರಾತಿನಿಧ್ಯ. ಅಗತ್ಯ. ಇಲ್ಲಿ ಬಡವರು ಬಡವರಾಗಿಯೇ ಸಾಯುತ್ಥಿದ್ದಾರೆ.ಕೇವಲ ಅಖಂಡತೆಯ ಕುರಿತು ಮಾತನಾಡಿದರೆ ಸಾಲದು. ಅಭಿವೃದ್ಧಿಯನ್ನೂ ಸರಿಸಮನಾಗಿ ಮಾಡಬೇಕು.


    - ಪವನ ಹೆತ್ತೂರು >

    7.In true sense no one is interested i


    - Adina Suresh >

    8.Evnige makode bere yenu kelsa ella nodi adke engadru rajakiya madana anta enta helke kodtidane evna niru nralu ellad kade tagand ogi bit barbeku umesh katthe...


    - Srinivas Srini>

    9.ಕತ್ತಿಗೆ ಮಾಡಲಿಕ್ಕೆ ಏನು ಕೆಲಸ ಇಲ್ಲವಂತೆ ಕಾಣುತ್ತೆ. ಆಗಾಗ ಮಾಧ್ಯಮಗಳ ಮುಂದೆ ಬಂದು ಬಾಯಿಗೆ ಬಂದ ಹಾಗೆ ಮಾತಾನಾಡುತ್ತಾತರೆ. ಅವರಿಗೆ ಪ್ರಚಾರದ ಹುಚ್ಚು ಇರಬೇಕು...ಇಂತಾವರು ಜನ್ರನ್ನು ಆಳುತ್ತಿದ್ದಾರೆ...ನಾಚಿಕೆಯಾಗಬೇಕು.....


    - Appu Veereu>

    10.ಕರ್ನಾಟಕ ಇಂದು ಏದುರಿಸುತ್ತಿರವ ಪ್ರಮುಖ ಸಮಸ್ಸೆಗಳ ಕುರಿತು ಹೆಚ್ಚು ಕ್ರಿಯಾಶೀಲರಾಗದ ನಮ್ಮ ರಾಜಕಾರಣಿಗಳು ,ಅಂತಹ ನಾಯಕರನ್ನು ಚುನಾಯಿಸಿದ ಸಾರ್ವಭೌಮ ಮತದಾರ ಪ್ರಭು ಹೆಚ್ಚು ಜಾಗೃತವಾಗಬೇಕು.ನಮ್ಮಲ್ಲಿ ನಾಡಾಭಿಮಾನ,ಭಾಷಾಭಿಮಾನ ಜಾಗ್ರತವಾಗಿದ್ದರೆ ಯಾವದೇ ರಾಜಕೀಯ ದಲ್ಲಾಳಿಗಳಿಂದ ಕರ್ನಾಟಕ ಮಾತೆಯನ್ನು ತುಂಡರಿಸಲು ಸಾಧೄವಿಲ್ಲ....ಜೈ ಕನ್ನಡಮ್ಮ


    - Ibrahimasa Naykodi>

    11.If we want development then we should change our opinion, we will have electe best people not dived state. One think I want ask people like katti sir what did for north karnatak?


    - Siddaram Biradar>

    12.The so called boddijeevi galu are waste bodies they just can write fictions not reallities


    - Santosh Patil>

    13.The so called boddijeevi galu are waste bodies they just can write fictions not reallities... in fact being an activist i my self was going to ask for separate north karnataka state


    - Santosh Patil>

    14.Utthara karnataka nodidre,Adre olleyadu ansuthe....


    - Prasanna Jeddinamane>

    15.Abirudhige odaku pariharavala


    - Lokesh An>

    16.ಇವರನ್ನು ಯಾಕೆ ಗಡಿಪಾರು ಮಾಡಬಾರದು ?


    - Prakash PC>

    17.ಅಖಂಡವಾದ ನಮ್ಮ ನಾಡನ್ನು ಖಂಡ ಖಂಡ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಗೆ ಖಂಡ-ತುಂಡಾಗಿ ಮಾಡಬೇಕು.


    - Ullas Urs>

    Archives

    August 2016
    July 2016
    December 2015
    April 2015
    February 2015
    September 2014
    August 2014
    May 2014
    January 2014
    December 2013
    November 2013

    Categories

    All

    RSS Feed

Terms of Service
All right reserved
ನನ್ನ ಹೋಂಪೇಜ್ ಮಾಡು
Bookmark This Site
powered by GDesign