ಆಗಸ್ಟ್: ತಿಂಗಳ ಹಬ್ಬಗಳು: ರಕ್ಷಾ ಬಂಧನ (ಆಗಸ್ಟ್ ೨೦); ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ ೨೮)
- ಆಗಸ್ಟ್ ೧: ೧೯೦೭ರಲ್ಲಿ ಇಂಗ್ಲೆಂಡ್ನಲ್ಲಿ ರಾಬರ್ಟ್ ಬಾಡೆನ್-ಪೊವೆಲ್ ಸ್ಕೌಟ್ ಶಿಬಿರವನ್ನು ಪ್ರಾರಂಭಿಸಿ ಸ್ಕೌಟ್ ಚಳುವಳಿಗೆ ನಾಂದಿ ಹಾಕಿದರು.
- ಆಗಸ್ಟ್ ೨: ಕ್ರಿ.ಪೂ. ೨೧೬ರಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್‍ನ ಸೇನೆ ಎರಡನೇ ಪ್ಯೂನಿಕ್ ಯುದ್ಧದಲ್ಲಿರೋಮ್ ಗಣರಾಜ್ಯವನ್ನು ಸೋಲಿಸಿತು.
- ಆಗಸ್ಟ್ ೬: ೧೯೪೫ರಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಅಮೇರಿಕ ದೇಶದ ವಾಯುಸೇನೆಯು ಜಪಾನಿನ ಹಿರೋಶಿಮನಗರದ ಮೇಲೆ ಮೊದಲ ಅಣು ಬಾಂಬ್ ಉಪಯೋಗಿಸಿತು (ಚಿತ್ರಿತ).
- ಆಗಸ್ಟ್ ೯: ೧೯೭೪ರಲ್ಲಿ ಅಮೇರಿಕ ದೇಶದ ರಾಷ್ಟ್ರಪತಿಯಾಗಿದ್ದ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಘಟನೆಯಿಂದ ರಾಜೀನಾಮೆ ನೀಡಿದರು.
- ಆಗಸ್ಟ್ ೯: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್ ಎಂದು ಪ್ರಸಿದ್ದಿಯಾಗಿದ್ದ ದಿ॥ವಿನಾಯಕ ಕೃಷ್ಣ ಗೋಕಾಕ್ ರವರ ಜನ್ಮ ದಿನ.
- ಆಗಸ್ಟ್ ೧೫: ೧೯೪೭ರಲ್ಲಿ ಬ್ರಿಟೀಷ್ ರಾಜ್ಯ ಇಬ್ಬಾಗಗೊಂಡು ಭಾರತವು ಸ್ವಾತಂತ್ರ್ಯ ಪಡೆಯಿತು.
- ಆಗಸ್ಟ್ ೨೨: ೧೭೯೧ರಲ್ಲಿ ಹೈತಿಯಲ್ಲಿ ಗುಲಾಮರು ದಂಗೆಯೆದ್ದು ಹೈತಿ ಕ್ರಾಂತಿಯ ಪ್ರಾರಂಭ.
ವಿಕಿಯ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಅಮರಾವತಿ (ಆಂಧ್ರ ಪ್ರದೇಶ) ಆಂಧ್ರಪ್ರದೇಶದ ಒಂದು ಐತಿಹಾಸಿಕ ಪಟ್ಟಣ. ಬೌದ್ಧರ ಕಾಲದಿಂದಲೂ ಪ್ರಸಿದ್ಧವಾದ ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ (ಚಿತ್ರಿತ)ಸ್ತೂಪವಿದೆ.
- ರಬ್ಬರು ಬೀಜದಿಂದ(ಚಿತ್ರಿತ)ರಬ್ಬರು ಬೀಜದ ಎಣ್ಣೆಯನ್ನು ತೆಗೆಯಲಾಗುತ್ತದೆ. ಅಡಿಗೆಗೆ ಬಳಸಲಾಗದ ಈ ಎಣ್ಣೆಯಿಂದ ಫ್ಯಾಟಿ ಆಮ್ಲಗಳು ಮತ್ತಿತರ ರಾಸಾಯನಿಕಗಳನ್ನು ತಯಾರುಮಾಡಲಾಗುತ್ತದೆ.
- ಕಾಳಿಂಗ ಸರ್ಪ - ೫.೬ ಮೀಟರ್‌ಗಳವರೆಗೆ ಬೆಳೆಯುವ ವಿಶ್ವದ ಅತಿ ಉದ್ದದ ಈ ವಿಷಪೂರಿತ ಹಾವು ಆಗ್ನೇಯ ಏಷ್ಯಾ ಮತ್ತು ಭಾರತದ ಭಾಗಗಳಲ್ಲಿ ಕಾಣಸಿಗುತ್ತದೆ.
- ಕೊವಾಲಾ - ದಿನದ ೧೬ ಗಂಟೆಗಳಷ್ಟು ಕಾಲ ನಿದ್ದೆ ಮಾಡುವ ಈ ಪ್ರಾಣಿಯ ಮುಖ್ಯ ಆಹಾರ ನೀಲಗಿರಿ ಮರದ ಎಲೆಗಳು.
- ರೆಕ್ಕೆದಿರಿಸು ಹಾರಾಟ - ಒಂದು ವಿಶೇಷವಾದ ಜಿಗಿತದ ದಿರಿಸನ್ನು ಬಳಸಿಕೊಂಡು ಗಾಳಿಯಲ್ಲಿ ತೇಲಿಕೊಂಡು ಸಾಗುವ ಕ್ರೀಡೆಯಾಗಿದೆ.
- ಫ್ಯುಜಿಟಾ ಮಾಪಕ - ಇದು ಸುಂಟರಗಾಳಿಯ ತೀವ್ರತೆಯನ್ನು ಅಳೆಯುವ ಸಾಧನವಾಗಿದೆ.
- ಭಿಲ್ಲರು - ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ.