ನಿಮ್ಮ ಪ್ರೋತ್ಸಾಹವೇ ನಮಗೆ ಬಲ |
Flash PlugIn for Android 4 Series |
ಆತ್ಮೀಯರೇ,
ಕಳೆದ ಕೆಲವು ತಿಂಗಳುಗಳ ಹಿಂದೆ adobe androidಗೆ ಫ್ಲಾಶ್ ಸಪೋರ್ಟ್ (Flash Supposrt) ನೀಡುವುದನ್ನ ನಿಲ್ಲಿಸಿದೆ. ಪರಿಣಾಮವಾಗಿ ಎಷ್ಟೇ ಹುಡುಕಿದರೂ ಕೆಲವೊಮ್ಮೆ android 4 (JellyBean) ಪ್ಲೇ ಸ್ಟೋರ್ (Player Store)ನಲ್ಲಿ ಫ್ಲಾಶ್ ಪ್ಲೇಯರ್ ಪ್ಲಗ್ ಇನ್ ಲಭಿಸುವುದಿಲ್ಲ. ಆದ್ರೆ, ಅದಿಲ್ಲದೆ ಹೋದ್ರೆ ಎಷ್ಟೋ ವೆಬ್ ಸೈಟ್ (website)ಗಳ ಮಾಹಿತಿ (Content) ತೆರೆದುಕೊಳ್ಳುವುದಿಲ್ಲ. ಹೀಗಾಗಿ, ಫ್ಲಾಶ್ ಕಂಟೆಂಟ್ ಅನ್ನೇ ಪ್ರಧಾನವಾಗಿಸಿಕೊಂಡಿರುವ ಅದೇಷ್ಟೋ ವೆಬ್ ಸೈಟ್ ಗಳ ಮುಖ್ಯಸ್ಥರಿಗೆ ಅತ್ತ ಕೇವಲ mobileಗಾಗಿ ಕಂಟೆಂಟ್ ಸ್ವರೂಪ ಬದಲಾಯಿಸಲೂ ಆಗದೇ ಇತ್ತ ಮೊಬೈಲ್ ನಲ್ಲಿ ವೆಬ್ ಸೈಟ್ ನೋಡುವವರಿಗೆ ಮಾಹಿತಿ ತಲುಪಿಸಲೂ ಆಗದೇ, ಅದಕ್ಕೆ ಸೂಕ್ತ ಪರಿಹಾರ ಕಂದುಕೊಲೂ ಆಗದೆ ಅನೇಕರು ಪರದಾಡುತ್ತಿದ್ದಾರೆ. ಅದನ್ನ ಮನಗಂಡಿರುವ ಕನ್ನಡCircle ತಂಡ ಈ ಎಲ್ಲಾ ಪ್ಲಗ್ ಇನ್ ಗಳನ್ನ ಸಂಗ್ರಹಿಸಿ ಒಂದೆಡೆಗೆ ನೀಡುತ್ತಿದ್ದು, ಈಗ ನೀವದನ್ನು ನೇರವಾಗಿ ಕನ್ನಡCircleನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅದಕ್ಕಾಗಿ ಹೀಗೆ ಮಾಡಿ. 1. ಮೊದಲು ನಿಮಗೆ ಬೇಕಾದ version ಅನ್ನು ಡೌನ್ಲೋಡ್ ಮಾಡಿಕೊಳ್ಳಿ. 2. ಡೌನ್ಲೋಡ್ ಅದ ಎಪಿಕೆ (.apk) ಫೈಲ್(file)ನ್ನು ಮೊದಲು ಮೊಬೈಲ್ ಗೆ ವರ್ಗಾಯಿಸಿಕೊಳ್ಳಿ 3. ನಂತರ ಡೌನ್ಲೋಡ್ ಮಾಡಿಕೊಂಡಿರುವ Flash Player 11.1 ಫೈಲ್ ಮೇಲೆ ಕ್ಲಿಕ್ ಮಾಡಿ, ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಿ(Install). ಹಾಂ, ಬಳಿಕ ಒಮ್ಮೆ ಮೊಬೈಲ್ ಆಫ್ ಮಾಡಿ ಆನ್ ಮಾಡಿ PlugIn ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇಷ್ಟೆಲ್ಲಾ ಅದ ಬಳಿಕ ಕನ್ನಡCircleನಲ್ಲಿ ಅಭಿಪ್ರಾಯ ಒಂದನ್ನು ಗೀಚುವುದು ಮರೆಯಬೇಡಿ. |
|