ಕನ್ನಡCircle ಯಾಕೆ?
ಇಂಟರ್ನೆಟ್ ನ ಯಾವುದೋ ಮೂಲೆಯಲ್ಲಿ ಇದ್ದೂ ಇಲ್ಲದ ಹಾಗಿರುವ ಕನ್ನಡ ಭಾಷೆಯನ್ನು ಮುಖ್ಯ ವಾಹಿನಿಗೆ ತಂದು, ಅದರ ಬಳಕೆ ಸರ್ವವ್ಯಾಪಿಯಾಗುವಂತೆ ಮಾಡುವುದೇ ನಮ್ಮ ಕನ್ನಡCircleನ ಗುರಿ. ವೆಬ್ ಲೋಕದಲ್ಲಿ ಹರಿದು ಹಂಚಿ ಹೋಗಿರುವ
ಕನ್ನಡ ತಾಣಗಳು ಮತ್ತು ಮಾಹಿತಿಯನ್ನು ಒಂದೆಡೆಗೆ
ತಂದು ಅದೆಲ್ಲವೂ ಏಕಕಾಲಕ್ಕೆ ದೊರೆಯುವಂತೆ
ಮಾಡುವ ಮಹತ್ವಾಕಾಂಕ್ಷೆಯೇ ಕನ್ನಡCircleನ ಉಗಮಕ್ಕೆ
ಕಾರಣ. ಒಮ್ಮೆ ಕನ್ನಡCircleಗೆ ಪ್ರವೇಶಿಸಿದರೆ ಸಾಕು, ಕಣ್ಣು ಮಚ್ಚಿಕೊಂಡು ನಿಮಗೆ ಬೇಕಾದ ತಾಣವನ್ನು
ತಲುಪಬಹುದು. ಇಂಟರ್ನೆಟ್ನಲ್ಲಿ ಎಲ್ಲವೂ
ಇಂಗ್ಲೀಷ್ ಮಯವಾಗಿದ್ದು ಕನ್ನಡ ಬಳಕೆಯೇ ಕಡಿಮೆಯಾಗಿದೆ.
ಇರುವ ಅಷ್ಟೋ ಇಷ್ಟೋ ಕನ್ನಡದ ವೆಬ್
ಸೈಟ್ಸ್, ಬ್ಲಾಗ್ಸ್, ಮಾಹಿತಿಗಳೆಲ್ಲವೂ
ಅಲ್ಲಲ್ಲಿ ಚದುರಿಹೋಗಿವೆ. ಯಾವುದೇ ಒಂದು ಸಣ್ಣ ಮಾಹಿತಿ ಹುಡುಕಬೇಕಾದರೂ ಸಾಕಷ್ಟು ಸಮಯ ವ್ಯಯ ಮಾಡಬೇಕಾಗುತ್ತದೆ. ಈ ಸಮಸ್ಯೆಗೆ
ಪರಿಹಾರ ನೀಡಲೆಂದೇ ಕನ್ನಡCircle ಕನ್ನಡ ಸರ್ಕಲ್ ತಂಡ ಕಂಕಣಬದ್ಧವಾಗಿದೆ. ಕನ್ನಡCircleಗೆ ಬಂದರೇ ಸಾಕು ಕನ್ನಡದ ಎಲ್ಲಾ
ತಾಣಗಳನ್ನು ಇಲ್ಲಿಂದ ಸುಲಭವಾಗಿ ಜಾಲಾಡಬಹುದು.
ನಿಮಗೆ ಬೇಕಾದ ಯಾವುದೇ ಮಾಹಿತಿಯನ್ನು ಕ್ಷಣ ಮಾತ್ರದಲ್ಲೇ
ಪಡೆಯಬಹುದು. ಇದರಿಂದ ನಿಮ್ಮ
ಅಮೂಲ್ಯ ಸಮಯ, ಶ್ರಮ ಮತ್ತು ಖರ್ಚನ್ನೂ
ಉಳಿಸಬಹುದು.
ಕನ್ನಡದCircle ನಿಂದ ಲಾಭವೇನು ?
ಇಂಗ್ಲಿಷ್
ಬಲ್ಲವರಿಗೆ ಗೂಗಲ್ ಇರುವ ರೀತಿಯಲ್ಲಿ ಕನ್ನಡಿಗರಿಗೆ ಯಾವುದೇ ಅನುಕೂಲ ಈವರೆಗೆ ಇಲ್ಲ. ಈ
ನಿಟ್ಟಿನಲ್ಲಿ ಪ್ರಯತ್ನ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಕನ್ನಡCircle ನಿಮ್ಮ ಮುಂದಿದೆ. ಈ ಮೂಲಕ ವೆಬ್
ಪ್ರಪಂಚದಲ್ಲಿ ಕನ್ನಡ ಭಾಷೆ ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗುತ್ತದೆ. ಇಂಗ್ಲಿಷ್ ಗೊತ್ತಿರುವವರು,
ಗೊತ್ತಿಲ್ಲದವರು ಹಾಗು ಕನ್ನಡವನ್ನೇ ಬಳಸಬೇಕೆಂಬ ಒಲವುಳ್ಳವರಿಗೂ ಕನ್ನಡCircle ಒಂದು ಆಪ್ಯಾಯಮಾನವಾದ ವೇದಿಕೆ. ಇಂಟರ್ ನೆಟ್ ನಲ್ಲಿ ಕನ್ನಡ ಬಳಕೆ ತೀರಾ ಕಡಿಮೆಯಿದ್ದರೂ ನೆಟ್ ಜಾಲಾಡುವವರ ಸಂಖ್ಯೆ ಏನೂ ಕಡಿಮೆಯಿಲ್ಲ. ಅದರಲ್ಲಿ ಲಕ್ಷಾಂತರ ಕನ್ನಡಿಗರು ಪ್ರತಿನಿತ್ಯ
ಇಂಟರ್ ನೆಟ್ ಬಳಸುತ್ತಿದ್ದಾರೆ. ಆದರೆ, ಕನ್ನಡ ಭಾಷೆಯನ್ನೇ ಬಳಸಿಕೊಂಡು ಮಾಹಿತಿ
ಪಡೆಯುವತ್ತಿರುವವರು ತೀರಾ ಕಡಿಮೆ. ಹಾಗಾಗಿ, ಇವರೆಲ್ಲರೂ ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲೇ ಮಾಹಿತಿ
ಪಡೆಯಲು ಕನ್ನಡCircle ಒಂದು ಸುಲಭ ಸಾಧನವಾಗಲಿದೆ.
ತನ್ಮೂಲಕ ಎಲ್ಲೆಡೆ ಕನ್ನಡ ಭಾಷಾ ಬಳಕೆ ವ್ಯಾಪಿಸುವಂತೆ
ಮಾಡಲು ಕನ್ನಡCircle ಶ್ರಮಿಸಲಿದೆ. ಉದ್ದೇಶ ಏನು?
ಹೊಸ ಸವಾಲುಗಳಿಗೆ
ಒಗ್ಗಿಕೊಂಡು ಕನ್ನಡವನ್ನು ಕಟ್ಟಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರಿಗೂ ಎಲ್ಲದ್ದಕ್ಕೂ ಕನ್ನಡCircleನಲ್ಲಿ ಜಾಗವಿದೆ. ವಿಶ್ವದ ಯಾವುದೇ ಭಾಗದಲ್ಲಿ ನೆಲೆಸಿರುವ ಕನ್ನಡಿಗ ತನ್ನ ವೆಬ್ ತಾಣವನ್ನು
ಇಲ್ಲಿ ಸೇರಿಸಿ ಹೆಚ್ಚು ಹೆಚ್ಚು ಜನರನ್ನು ತಲುಪಬಹುದು. ಪ್ರತಿಯೊಬ್ಬರೂ ಬೆಳೆಯುತ್ತಾ
ಕನ್ನಡವನ್ನೂ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತಾಗಬೇಕು. ಇಲ್ಲಿ ವಾಣಿಜ್ಯ ಉದ್ದೇಶಕ್ಕಿಂತ
ಅಂತರ್ಜಾಲದಲ್ಲಿ ಕನ್ನಡವನ್ನು ಎಲ್ಲರೂ ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದು ಹಾಗೂ ಒಂದೇ
ಸೂರಿನಡಿ ಕನ್ನಡದ ಎಲ್ಲಾ ತಾಣಗಳನ್ನು ಸೇರಿಸುವುದು ಕನ್ನಡCircle ನ ಇಂಗಿತ.
ಪ್ರೀತಿಯಿಂದ ರಮಾಕಾಂತ ಗುಗ್ರಿ ಸಂಸ್ಥಾಪಕ ಸಂಪಾದಕ, ಕನ್ನಡCircle
hello@kannadacircle.in